25th April 2025
ಚಡಚಣ: ವಿಜಯಪುರ ಸೋಲಾಪುರ ರಾಷ್ಟ್ರೀಯ ಹೆದ್ದಾರಿಯ ಹೊರ್ತಿ, ಧೂಳಖೇಡ ಮಹಾ ಮಾರ್ಗದ ಬದಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಇಂಡಿ ವತಿಯಿಂದ ೨೦೨೫_೨೬ ನೇ ಸಾಲಿನ ಮುಂಗಾರು ಹಂಗಾಮಿನ ಸಸಿ ನೆಡುವಿಕೆಯನ್ನು ಚಡಚಣ ತಾಪಂ ಇಒ ಸಂಜಯ ಖಡಗೇಕರ ಅವರು ಅಶ್ವತ್ಥ ವೃಕ್ಷಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಈ ನೆಲಕ್ಕೆ ಬೀಳುವ ಪ್ರತಿ ಹನಿಯನ್ನೂ ಸದ್ಬಳಕೆ ಮಾಡಿಕೊಳ್ಳುವ ದೃಷ್ಟಿಯಿಂದ ತೀರ ಮುಂಚಿತವಾಗಿ ಈ ವರ್ಷ ಸಸಿ ನೆಡುವುದನ್ನು ನೀರುಣಿಸುವ ಮುಖಾಂತರ ಪ್ರಾರಂಭಿಸಲಾಗಿದೆ. ಮುಂಚಿತವಾಗಿ ನೆಟ್ಟ ಸಸಿಗಳು ಅಪರೂಪಕ್ಕೊಮ್ಮೆ ಬೀಳುವ ಪ್ರತಿ ಹನಿಯನ್ನೂ ಕುಡಿದು, ಆರೋಗ್ಯಯುತವಾಗಿ, ಶಕ್ತಿಯುತವಾಗಿ ಬೆಳೆದು ಬಹು ಬೇಗನೆ ಮರಗಳಾಗಿ ನಮ್ಮ ಸುತ್ತ-ಮುತ್ತಲಿನ ಪರಿಸರ ಹಸಿರು ಮತ್ತು ಉಸಿರನ್ನು ನೀಡುತ್ತದೆ. ಈ ಭೂಮಿಯ ಮೇಲೆ ಇರುವ ಪರಿಸರದ ರಕ್ಷಣೆ ನಮ್ಮೇಲ್ಲರ ಹೊಣೆಯಾಗಿದೆ. ಈ ದೃಷ್ಟಿಯಿಂದ ಸಾಮಾಜಿಕ ಅರಣ್ಯ ಇಲಾಖೆಯ ಪರಿಸರ ಕಳಕಳಿ, ಸಂರಕ್ಷಣೆ ಕಾರ್ಯ ಪ್ರಶಂಸನೆಗೆ ಅರ್ಹವಾದುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಶ್ರೀ ಮಂಜುನಾಥ ಧುಳೆ , ಗಸ್ತು ವನಪಾಲಕ ಶ್ರೀ ಡಿ ಎ ಮುಜಗೊಂಡ, ನಾಗೇಶ್ ಬಿರಾದಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಂಜಯ ವಠಾರ ಸೇರಿದಂತೆ ಸಾರ್ವಜನಿಕರು, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ